ಮಂಗಳೂರು: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ, ಮೂವರು ದೋಷಿ, ಸೆ.17ಕ್ಕೆ ಶಿಕ್ಷೆ ಪ್ರಕಟ ನಗರದ ವೆಲೆನ್ಸಿಯಾದ ಜೋನಸ್ ಸ್ಯಾಮ್ಸನ್ (40) ವಿಕ್ಟೋರಿಯಾ ಮಥಾಯಿಸ್ , ಮರಕಡದ ರಾಜು ದೋಷಿಗಳೆಂದು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನಸ್ವಾಮಿ ಆದೇಶ ಹೊರಡಿಸಿದ್ದಾರೆ. ಮಂಗಳೂರು: ಐದು ವರ್ಷಗಳ ಹಿಂದೆ ನಗರದಲ್ಲಿ ನಡೆದಿದ್ದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದಲ್ಲಿ ದಂಪತಿ ಸೇರಿದಂತೆ ಮೂವರ ಮೇಲಿನ ಆರೋಪ ಸಾಬೀತಾಗಿದೆ. ಆರೋಪಿಗಳು ಶ್ರೀಮತಿ ಶೆಟ್ಟಿಯ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಗರದ ಹಲವೆಡೆ ಬ್ಯಾಗ್ ನಲ್ಲಿ ಎಸೆದಿದ್ದರು.ನಗರದ ವೆಲೆನ್ಸಿಯಾದ ಜೋನಸ್ ಸ್ಯಾಮ್ಸನ್ (40) ವಿಕ್ಟೋರಿಯಾ ಮಥಾಯಿಸ್ , ಮರಕಡದ ರಾಜು ದೋಷಿಗಳೆಂದು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನಸ್ವಾಮಿ ಆದೇಶ ಹೊರಡಿಸಿದ್ದಾರೆ.ಶಿಕ್ಷೆಯ ಪ್ರಮಾಣವನ್ನು ಸೆಪ್ಟೆಂಬರ್ 17 ರಂದು ಪ್ರಕಟಿಸಲಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಕ್ರಾಸ್ತಾ ತಿಳಿಸಿದರು.ಮಂಗಳೂರು ಮೂಲದ ಶ್ರೀಮತಿ ಶೆಟ್ಟಿ ಅತ್ತಾವರದಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ಇಟ್ಟುಕೊಂಡಿದ್ದರು. ಜೊತೆಗೆ ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದ್ದರು. ಈ ಚಿಟ್ ಫಂಡ್‌ನಲ್ಲಿ ಜೋನಸ್ ಎರಡು ಸದಸ್ಯತ್ವ ಹೊಂದಿದ್ದರು. ಆದರೆ ಶ್ರೀಮತಿ ಶೆಟ್ಟಿ ಅವರಿಂದ ಸಾಲ ಪಡೆದಿದ್ದ ಜೋನಸ್, ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಎರಡು ಕಂತಿನ ರೂ.60,000 ಹಣ ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸುತ್ತಿದ್ದರು. ಶ್ರೀಮತಿ ಶೆಟ್ಟಿ 2019ರ ಮೇ 11ರಂದು ಹಣ ಕೇಳುವುದಕ್ಕಾಗಿ ಆರೋಪಿ ಜೋನಸ್‌ನ ಮನೆಗೆ ತೆರಳಿದ್ದರು. ಅಲ್ಲಿ ಮಾತಿಗೆ ಮಾತು ಬೆಳೆದು ಜೋನಸ್ ಮರದ ತುಂಡಿನಿಂದ ಶ್ರೀಮತಿ ಶೆಟ್ಟಿಯ ತಲೆಗೆ ಹೊಡೆದಿದ್ದ. ಬಳಿಕ ಜೋನಾಸ್ ಸಂತ್ರಸ್ತೆಯ ದ್ವಿಚಕ್ರ ವಾಹನವನ್ನು ಓಡಿಸಿಕೊಂಡು ಹೋಗಿ ನಾಗುರಿ ಬಳಿ ಎಸೆದಿದ್ದ.ಮತ್ತೆ ಮನಗೆ ವಾಪಸ್ಸಾಗಿದ ಜೋನಸ್, ಪ್ರಜ್ಞಾಹೀನರಾಗಿದ್ದ ಶ್ರೀಮತಿ ಶೆಟ್ಟಿಯನ್ನು ಅವರ ಪತ್ನಿ ವಿಕ್ಟೋರಿಯಾ ಬಚ್ಚಲು ಕೋಣೆಗೆ ಎಳೆದುಕೊಂಡು ಹೋಗಿ ಹರಿತವಾದ ಕತ್ತಿಯಿಂದ ಕುತ್ತಿಗೆಯನ್ನು ಕೊಯ್ದು ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ರುಂಡ, ಕೈ, ಕಾಲು ಹಾಗೂ ಇತರ ಭಾಗಗಳನ್ನು 29 ತುಂಡುಗಳಾಗಿ ಮಾಡಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿ ನಗರದ ಹಲವೆಡೆ ಎಸೆದಿದ್ದರು. ಶ್ರೀಮತಿ ಶೆಟ್ಟಿಯ ವ್ಯಾನಿಟಿ ಬ್ಯಾಗ್ ಮತ್ತು ಚಪ್ಪಲಿಯನ್ನು ಆರೋಪಿಗಳು ಮನೆಯಲ್ಲಿ ಸುಟ್ಟು ಹಾಕಿದ್ದರು. ನಂತರ ಆರೋಪಿಗಳು ರಾಜು ಮನೆಗೆ ತೆರಳಿ ಆಶ್ರಯ ಪಡೆದಿದ್ದರು.ಕೆಪಿಟಿ ಬಳಿ ಸಂತ್ರಸ್ತೆಯ ತಲೆ, ಬೆರಳಿನ ತುಂಡ ಪತ್ತೆಯಾಗಿರುವುದಾಗಿ ಪೆಟ್ಟಿ ಅಂಗಡಿ ವ್ಯಾಪಾರಿ ಸೋಮೇಶ್ ನೀಡಿದ್ದ ದೂರು ಆಧರಿಸಿ ಮಂಗಳೂರು ಪೂರ್ವ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಮಹೇಶ್ ಪ್ರಕರಣದ ತನಿಖೆ ನಡೆಸಿದರು. ಸಂತ್ರಸ್ತೆಯ ಕೊನೆಯ ಫೋನ್ ಕರೆ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು. ಅಪರಾಧ ನಡೆದ ಕೆಲವು ದಿನಗಳ ನಂತರ ಜೋನಾಸ್ ನನ್ನು ಬಂಧಿಸಲು ಪೊಲೀಸರು ಆತನ ಮನೆಗೆ ಹೋದಾಗ ಆರೋಪಿಗೆ ಆತ್ಮಹತ್ಯೆಗೆ ಯತ್ನಿಸಿದ್ದ. ನ್ಯಾಯಾಧೀಶರು 48 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದರು ಮತ್ತು ಐಪಿಸಿಯ ಸೆಕ್ಷನ್ 414 ರ ಅಡಿಯಲ್ಲಿ ಸೆಕ್ಷನ್ 302, 392, 201 ಮತ್ತು ಮೂರನೇ ಆರೋಪಿ ರಾಜು ದಂಪತಿಯನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದರು.